Homeತಾಲ್ಲೂಕುಹೊಸನಗರ

ನ್ಯಾಶನಲ್ ಬ್ಯೂಟಿ ಕಾಂಪಿಟೇಶನ್ ಗೆ ಆಯ್ಕೆಯಾದ ಹೊಸನಗರದ ಸೀಮಾ ಶೆರಾವೊ

ಹೊಸನಗರ.ಆಗಸ್ಟ್.02: ಬೆಂಗಳೂರಿನಲ್ಲಿ ನಡೆದ ಮಾವಿನ್ ಪ್ಲಸ್ ಇಂಡಿಯಾ ಬ್ಯೂಟಿ ಪೆಜೆನ್ಟ್ ಅಡಿಷನಲ್ಲಿ ಹೊಸನಗರದ ಜೆಸಿಐ ಕೊಡಚಾದ್ರಿ ಅಧ್ಯಕ್ಷೆ ಸೀಮಾ ಶೆರಾವೊ ಆಯ್ಕೆಯಾಗಿದ್ದು, ನ್ಯಾಷನಲ್ ಬ್ಯೂಟಿ ಪೆಜೆನ್ಟ್ ನಲ್ಲಿ ಭಾಗವಹಿಸಲಿದ್ದಾರೆ.

ನ್ಯಾಶನಲ್ ಬ್ಯೂಟಿ ಪೆಜೆನ್ಟ್ ಸೆ.22 ರಿಂದ 5 ದಿನಗಳ ಕಾಲ ದೆಹಲಿಯಲ್ಲಿ ನಡೆಯಲಿದ್ದು ಸೀಮಾ ಶೆರಾವೊ ರಾಜ್ಯದ ಪ್ರತಿನಿಧಿಯಾಗಿ ಭಾಗವಹಿಸಲಿದ್ದಾರೆ.

ಹೊಸನಗರದ ಸೀಮಾ 11 ವರ್ಷದಿಂದ ಹೊಸನಗರದ ಸಿಯಂಟೋ ಬ್ಯೂಟಿ ಸಲೂನ್ ನಡೆಸುತ್ತಿದ್ದು, 20 -22ರ ಜೆಸಿಐ ಹೊಸನಗರ ಕೊಡಚಾದ್ರಿಯ ಪ್ರಥಮ ಮಹಿಳಾ ಅಧ್ಯಕ್ಷರಾಗಿ ಕೂಡ ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದಾರೆ. ಬ್ಯೂಟಿಷನ್ ಅಸೋಸಿಯೇಷನ್ ಹೊಸನಗರದ ಮೊದಲ ಅಧ್ಯಕ್ಷರು ಹಾಗೂ ಸ್ಥಾಪಕ ಅಧ್ಯಕ್ಷರಾಗಿ ಕೂಡ ತೊಡಗಿಸಿಕೊಂಡಿದ್ದಾರೆ.

ಕರ್ನಾಟಕ ವೈಜ್ಞಾನಿಕ ಸಂಶೋಧನಾ ಪರಿಷತ್ ಹೊಸನಗರ ತಾಲೂಕಿನ ಅಧ್ಯಕ್ಷರಾಗಿರುವ ಸೀಮಾ ಇದೀಗ ನ್ಯಾಶನಲ್ ಬ್ಯೂಟಿ ಸ್ಪರ್ಧೆಗೆ ಆಯ್ಕೆಯಾಗಿ ಗಮನ ಸೆಳೆದಿದ್ದಾರೆ.

ಸಮಾಜದಲ್ಲಿಯ ಸುದ್ದಿಗಳನ್ನು ಆರಿಸಿ ಮತ್ತೆ ಸಮಾಜಕ್ಕೆ ನೀಡುವ ಒಂದು ಸಣ್ಣ ಪ್ರಯತ್ನ.. ಆ ಕಾರ್ಯದಲ್ಲಿ ಖಚಿತತೆ, ವಿಶ್ವಾಸಾರ್ಹತೆ, ಸಮಸ್ಯೆಯ ಬಿಂಬ, ಬಿಂಬಿತ ಸಮಸ್ಯೆಗೆ ಪರಿಹಾರದ ಯತ್ನ.. ಆ ಯತ್ನದಲ್ಲಿ ದಕ್ಕಿದ ಒಂದಷ್ಟು ಯಶಸ್ಸು.. ಇದರಲ್ಲಿ‌ ನಿರಂತರತೆ ಕಾಯ್ದುಕೊಳ್ಳುವ ಆಶಯ.. ಅಷ್ಟೆ..

What's your reaction?

Related Posts

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ ಸಿನಿಮಾಕ್ಕೆ ಜೂರಿ ಅವಾರ್ಡ್|

ಬೆಂಗಳೂರು ಸಿನಿ ಉತ್ಸವದಲ್ಲಿ ಮಲೆನಾಡಿನ ಕಲರವ | ಗಾರ್ಗಿ ಕಾರೇಹಕ್ಲು ನಿರ್ದೇಶನದ ಹಕ್ಕಿಗಾಗಿ…

1 of 51

Leave A Reply

Your email address will not be published. Required fields are marked *