
ಕೆ.ಬಿ.ಸರ್ಕಲ್ ಅಭಿವೃದ್ಧಿಗೆ ರೂ.7.2 ಕೋಟಿ ಅನುದಾನ : ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ ಶಾಸಕ ಬೇಳೂರು
ಹೊಸನಗರ: ತಾಲೂಕಿನ ಕೆ.ಬಿ.ಸರ್ಕಲ್ ಭಾಗದ ವಿವಿಧ ಅಭಿವೃದ್ಧಿಗೆ ರೂ.7.22 ಕೋಟಿ ಅನುದಾನ ನೀಡಿದ್ದು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದ್ದಾರೆ.
ಕೆ.ಬಿ.ಸರ್ಕಲ್ನಲ್ಲಿ ವಿವಿಧ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ ಅವರು, ಕೆ.ಬಿ.ಸರ್ಕಲ್ ಸೇರಿದಂತೆ ಇಲ್ಲಿಯ ಬಹುತೇಕ ಪ್ರದೇಶಗಳು ಕುಗ್ರಾಮವಾಗಿದ್ದು ರಸ್ತೆ, ನೀರು, ಕಾಲುಸಂಕಕ್ಕೆ ಆಧ್ಯತೆ ನೀಡಲಾಗಿದೆ ಎಂದರು.


ಹಸಿರುಮಕ್ಕಿಯಿಂದ ಕೆ.ಬಿ.ಸರ್ಕಲ್ವರೆಗೆ ಮರು ಡಾಂಬರೀಕರಣಕ್ಕೆ ರೂ.3 ಕೋಟಿ, ಜಾಲಬೈದೂರು ರಸ್ತೆ ಅಭಿವೃದ್ಧಿಗೆ 50 ಲಕ್ಷ, ಬೋರ್ಡಗಲ್ ಎಸ್ಸಿ ಕಾಲನಿಗೆ 20 ಲಕ್ಷ, ಕೋಡ್ಲುಕೊಪ್ಪ – ಬಾಗಸಾಲೆ ರಸ್ತೆ ಅಭಿವೃದ್ಧಿಗೆ 10 ಲಕ್ಷ, ಕೆ.ಬಿ.ಸರ್ಕಲ್ ಆಟದ ಮೈದಾನಕ್ಕೆ 4 ಲಕ್ಷ, ಕುರಿಕೊಪ್ಪ ಗ್ರಾಮದ ಹೈಮಾಸ್ಕ್ ದೀಪ ಅಳವಡಿಕೆಗೆ 2.5 ಲಕ್ಷ, ನಿಟ್ಟೂರು ಗ್ರಾಪಂ ವ್ಯಾಪ್ತಿಗೆ ಜಿಪಂ ಅನುದಾನದಲ್ಲಿ 6 ಲಕ್ಷ, ಬಾಣಾವರ ಭಾಸ್ಕರ್ ಮನೆಯ ಹತ್ತಿರ ಹಳ್ಳದ ಕಾಲುಸಂಕಕ್ಕೆ 15 ಲಕ್ಷ, ಹೊಸನಾಡು ಕೀರಕೋಡು ದೇವೇಂದ್ರ ಮನೆಯ ಸಮೀಪದ ಹಳ್ಳದ ಕಾಲುಸಂಕಕ್ಕೆ 15 ಲಕ್ಷ, ನಿಟ್ಟೂರು ಗ್ರಾಪಂ ಕುಡಿಯುವ ನೀರಿನ ಕಾಮಗಾರಿಗೆ 3 ಕೋಟಿ ಅನುದಾನ ಒದಗಿಸಲಾಗಿದೆ ಎಂದರು.
ಈ ವೇಳೆ ಸ್ಥಳೀಯ ವಿಶ್ವಕರ್ಮ ಸಮಾಜ, ಎಸ್ಸಿ ಕಾಲನಿ ನಿವಾಸಿಗಳು, ಮತ್ತಿಗೋಡು, ಮಳಲಿಹೊಳೆ, ಗಡಿ ನೇರಲು, ಕೆಸರೆ ಅಡಗಳಲೆ, ಬಾಣಾವರ, ಮೇಲಿನಕೆಸರೆ, ಹಾರೋಉತ್ತಿಗೆ ಭಾಗದ ಗ್ರಾಮಸ್ಥರು, ಹೊಸನಾಡು ಸರ್ಕಾರಿ ಪ್ರೌಢಶಾಲೆ ಸಮಿತಿಯವರು ವಿವಿಧ ಬೇಡಿಕೆ ಇಟ್ಟು ಶಾಸಕರಿಗೆ ಮನವಿ ಸಲ್ಲಿಸಿದರು.
ಪ್ರಮುಖರಾದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ, ಕೋಡ್ಲುಕೊಪ್ಪ ಸುರೇಶ್, ಪರಮೇಶ್ವರ್ ದೂಗೂರು, ಕರುಣಾಕರ ಶೆಟ್ಟಿ, ಚಂದಯ್ಯ ಜೈನ್, ನರಸಿಂಹ ಪೂಜಾರಿ, ಓಂಕಾರ್, ರಾಘವೇಂದ್ರ, ಯಶೋದಮ್ಮ, ಲೋಕೋಪಯೋಗಿ ಅಧಿಕಾರಿ ಸುನಿಲ್ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರು, ನಿಟ್ಟೂರು ಗ್ರಾಪಂ ವ್ಯಾಪ್ತಿಯ ಪ್ರಮುಖರು ಇದ್ದರು.

ಚಿತ್ರ: 8hos1p ಹೊಸನಗರ ತಾಲೂಕಿನ ಕೆ.ಬಿ.ಸರ್ಕಲ್ ಭಾಗದ ವಿವಿಧ ಭಾಗದ ಅಭಿವೃದ್ಧಿ ಕಾಮಗಾರಿ ಕಾರ್ಯಕ್ರಮಕ್ಕೆ ಶಾಸಕ ಬೇಳೂರು ಚಾಲನೆ ನೀಡಿದರು.











